ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್
ಅಭಿಷೇಕದ ಹಿಂದಿನ ದಿವಸ ಬ್ರಹ್ಮಕಲಶ ಸಹಿತ ಖಂಡ ಕಲಶಗಳಲ್ಲಿ ದ್ರವ್ಯಗಳನ್ನು ತುಂಬಿಸಿ ಪರಿಕಲಶಗಳಲ್ಲಿ ನೀರನ್ನು ತುಂಬಿಸಿ, ದೇವರನ್ನಾವಾಹಿಸಿ(ಅಶ್ವತ್ಥ, ಅತ್ತಿ, ಕಿರುಗೋಳಿ, ಗೋಳಿ, ಮಾವು ಮರಗಳ ತುದಿ ಎಲೆಗಳು) ಪಂಚಪಲ್ಲವಗಳನ್ನಿಟ್ಟು ,ತೆಂಗಿನಕಾಯಿಯನ್ನಿಟ್ಟು ರೇಷ್ಮೆ ವಸ್ತ್ರಗಳೆರಡನ್ನು ಸುತ್ತಿ, ಹೂವುಗಳಿಂದ ಅಲಂಕರಿಸಿ ಸುತ್ತಲೂ 9 ಅಥವಾ 5 ಕುಂಡಗಳಲ್ಲಿ ಬೇರೆ ಬೇರೆ ಸಮಿಧೆ ಸಹಿತ ಹತ್ತು ದ್ರವ್ಯಗಳಿಂದ ಪ್ರತ್ಯೇಕ 108 ಸಂಖ್ಯೆಗಳಲ್ಲಿ ಆಹುತಿಗಳನ್ನು ಕೊಡುವುದು. ಒಟ್ಟಾರೆ 9720 ಆಹುತಿಗಳಾಗುವುದು.
ಕುಂಡದ ಆಕಾರ ಮತ್ತು ಸಮಿಧೆಗಳ ವ್ಯತ್ಯಾಸ.
ಪೂರ್ವ ಚೌಕಾಕಾರ. ಪಲಾಶಸಮಿಧೆ.
ಆಗ್ನೇಯ ಅಶ್ವತ್ಥ ಎಲೆಯಾಕಾರ ಖದಿರಸಮಿಧೆ.
ದಕ್ಷಿಣ ಅರ್ಧಚಂದ್ರಾಕಾರ . ಅಶ್ವತ್ಥ ಸಮಿಧೆ.
ನೈಋತ್ಯ ತ್ರಿಕೋನಾಕಾರ ಕಿರು ಗೋಳಿ ಸಮಿಧೆ.
ಪಶ್ಚಿಮ ವೃತ್ತಾಕಾರ ಗೋಳಿ ಸಮಿಧೆ.
ವಾಯವ್ಯ ಷಟ್ಕೋನಾಕಾರ ಬಿಲ್ವಸಮಿಧೆ.
ಉತ್ತರ ಅಷ್ಟಭುಜಾಕಾರ ಅತ್ತಿಸಮಿಧೆ.
ಈಶಾನ್ಯ ಅಷ್ಟದಲಾಕಾರ ಕಾಶ್ಮರಿ ಸಮಿಧೆ (ಕರ್ಕಟೆಮುಳ್ಳು)
ಈ ರೀತಿಯಾಗಿ ಹೋಮವನ್ನು ಸಮರ್ಪಿಸಿ ಕಲಶದಲ್ಲಿ ದೇವರಿಗೆ ನೈವೇದ್ಯ ಸಮರ್ಪಣೆ ಮಾಡಿ ಮಂಟಪದ ಸುತ್ತಲೂ 8 ದಿಕ್ಕುಗಳಲ್ಲಿ ಪರಿವಾರಗಳಿಗೆ ಪಾಯಸದಿಂದ ಬಲಿಯನ್ನು ಸಮರ್ಪಿಸಿ ಮಹಾಮಂಗಳಾರತಿ ಮಾಡಿ ಪ್ರಾರ್ಥಿಸಿ, ಗರ್ಭಗುಡಿಗೆ ಹೋಗಿ, ದೇವರಿಗೆ ಪುಷ್ಪಾರ್ಚನೆ ಮಾಡಿ ನಾಳಿನ ನಿನ್ನ ಸ್ನಾನಕ್ಕಾಗಿ ಕಲಶಗಳನ್ನು ಅಧಿವಾಸ ಮಾಡಿರುತ್ತೇವೆ. ಸುಮುಹೂರ್ತದಲ್ಲಿ ಮಾಡಿಸಿ ನಮಗೆ ಪ್ರಸಾದವನ್ನು ಅನುಗ್ರಹಿಸು ಎಂದು ಪ್ರಾರ್ಥಿಸುವುದು.ಆನಂತರ ಕಲಶ ಮಂಟಪದ ಸಮೀಪದಲ್ಲಿ ಇತಿಹಾಸ ಪುರಾಣ, ಸಂಕೀರ್ತನೆಗಳನ್ನು ಹಾಡುತ್ತಾ ರಾತ್ರಿಯನ್ನು ಕಳೆಯಬೇಕು.
Leave a Reply