ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್
ಬ್ರಹ್ಮ ಕಲಶ ಅಭಿಷೇಕದ ಹಿಂದಿನ ದಿವಸ ರಾತ್ರಿ ಕಲಶಪೀಠದಲ್ಲಿ ಶಕ್ತಿದೇವತೆಯನ್ನು ಪೂಜಿಸಿ ಅದರ ಮೇಲೆ ಎಲ್ಲಾ ಕುಂಭಗಳನ್ನು ಧೂಪ ಹಿಡಿದು ಕೆಳಮುಖವಾಗಿ ಇಟ್ಟು ತಂತ್ರೋಕ್ತಕ್ರಮದಲ್ಲಿ ಸಂಸ್ಕಾರ ಮಾಡಿ ಮೇಲ್ಮುಖವಾಗಿ ಕುಂಭವನ್ನು ಜಗದಂಡಾಕಾರವಾಗಿ ಸ್ಮರಿಸಿ ನಾಡೀ ಭಾವನೆಯಲ್ಲಿ ದರ್ಭೆಯ ಕೂರ್ಚವನ್ನು ಹಾಕಿ ಜೀವ ಭಾವನೆಯಲ್ಲಿ ದ್ರವ್ಯಗಳನ್ನು ತುಂಬಿಸುವುದು.
1.ಬ್ರಹ್ಮಕಲಶದಲ್ಲಿ ಶಾಂತಿಜಲ (ನವರತ್ನ ಮಣಿಗಳು, ಚಿನ್ನ,ಗಂಧ)
ಅದರ 1 ನೇ ಸುತ್ತಿನಲ್ಲಿ (ದೈವಿಕ)
2.ಪಾದ್ಯ (ಸಾಸಿವೆ,ಪರ್ವತದ ಮಣ್ಣು,ಎಳ್ಳು, ಗರಿಕೆ ಹುಲ್ಲು)
3.ಆಚಮನ (ತಕ್ಕೋಲ,ಜಾಯಿಕಾಯಿ,ಲವಂಗ)
4.ಅರ್ಘ್ಯ (ಹಾಲು, ಬಿಳಿಸಾಸಿವೆ, ಮೊಸರು, ಎಳ್ಳು, ದರ್ಭೆ, ಜವೆಗೋಧಿ, ಅಕ್ಕಿ)
5.ಪಂಚಗವ್ಯ.
6.ತುಪ್ಪ.
7.ಜೇನುತುಪ್ಪ.
8.ಹಾಲು.
9.ಮೊಸರು.
ಎರಡನೇ ಸುತ್ತಿನಲ್ಲಿ (ಮಾನುಷ)
10.ಕಬ್ಬಿನರಸ.
11.ಹಣ್ಣುಗಳರಸ.
12.ಪಲಾಶ, ಶಿರೀಷ ,ಮಧೂಕ , ಹಲಸು, ಮಾವು, ಅತ್ತಿ, ಗೋಳಿ, ಅಶ್ವತ್ಥ ಕೆತ್ತೆಗಳ ಕಷಾಯ.
13, ಅರಳಿನ ಹುಡಿ.
14.ಗಂಧಜಲ.
15.ಪುಷ್ಪಜಲ.
16.ಚಿನ್ನ.
17.ರತ್ನಗಳು (ಮುತ್ತು, ವೈಢೂರ್ಯ, ವಜ್ರ, ಮರಕತ, ಗೋಮೇಧಿಕ, ಪುಷ್ಯರಾಗ, ಇಂದ್ರನೀಲ)
18.ಮುತ್ತು.
19.ಹವಳ.
20.ಜವೆಗೋಧಿ.
21.ಎಳ್ಳು.
22.ಗರಿಕೆಹುಲ್ಲು.
23.ಉತ್ಪಲ(ರಾತ್ರಿ ಅರಳುವ ತಾವರೆ )
24.ದರ್ಭೆ.
25.ಅಕ್ಕಿ.
ಮೂರನೇ ಸುತ್ತಿನಲ್ಲಿ (ಪೈಶಾಚ)
26.ಎಳ್ಳೆಣ್ಣೆ.
27.ಬೆಲ್ಲ.
28.ತೆಂಗಿನಹಾಲು.
29.ಎಳನೀರು.
30.ತೀರ್ಥದ ನೀರು.
31.ನದಿಯ ನೀರು.
32.ಸರೋವರದ ನೀರು.
33.ಬಾವಿಯ ನೀರು.
34.ಪರ್ವತದ ಮಣ್ಣು.
35.ಎತ್ತಿನಕೊಂಬುತಾಗಿದ ಮಣ್ಣು.
36.ಯಜ್ಞವೇದಿಕೆಯ ಮಣ್ಣು.
37.ಕೃಷಿಭೂಮಿಯ ಮಣ್ಣು.
38.ನೇಗಿಲಿನಲ್ಲಿ ಉತ್ತಮಣ್ಣು
39.ನದಿಯ ಮಣ್ಣು.
40.ಸಮುದ್ರದ ಮಣ್ಣು.
41.ತೀರ್ಥಕ್ಷೇತ್ರದ ಮಣ್ಣು.
42.ಗಂಧ.
43.ಗಂಧ.
44.ಗಂಧ
45.ಗಂಧ.
46.ಗಂಧ
47.ಗಂಧ
48.ಗಂಧ.
49.ಗಂಧ.
50.ಗಂಧ.
51.ಗಂಧ.
52.ಗಂಧ.
53.ಗಂಧ.
54.ಗಂಧ.
55.ಗಂಧ.
56.ಗಂಧ.
57.ಗಂಧ.
ನಾಲ್ಕನೇ ಸುತ್ತಿನಲ್ಲಿ (ಅತಿಪೈಶಾಚ)
(ಏಳು ಜಾತಿಯ ಗಂಧವಿಶೇಷಗಳು)
58.ಪಚ್ಚೆಕರ್ಪೂರ.
59.ಲಾವಂಚ.
60.ಕುಂಕುಮಕೇಸರಿ.
61.ಶ್ರೀಗಂಧ.
62.ಇರುವೇರಿ.
63.ಕಂಕುಷ್ಠ.
64.ಅಗರುಗಂಧ.
(ಏಳು ಜಾತಿಯ ರತ್ನಗಳು)
65.ವೈಢೂರ್ಯ.
66.ನೀಲ.
67.ಮಾಣಿಕ್ಯ.
68.ಹವಳ.
69.ವಜ್ರ.
70.ಮುತ್ತು.
71.ಗರುಡಶಿಲೆ.
(ಏಳು ಜಾತಿಯ ಕಷಾಯಗಳು)
72.ಗೋಳಿಕೆತ್ತೆಯ ಕಷಾಯ.
73.ಅಶ್ವತ್ಥ ಕಷಾಯ.
74.ಶಿರೀಷ ಕಷಾಯ.
75.ಪಲಾಶ ಕಷಾಯ
76.ಬಿಲ್ವ ಕಷಾಯ.
77.ಕಿರುಗೋಳಿ ಕಷಾಯ.
78.ನೆಲ್ಲಿ ಕಷಾಯ.
(ಏಳು ಜಾತಿಯ ಧಾನ್ಯಗಳು)
79.ಗೋಧಿ .
80.ಭತ್ತ.
81.ಜವೆಗೋಧಿ.
82.ದೊಡ್ಡಹೆಸರು.
83.ಎಳ್ಳು.
84.ಹೆಸರು.
85.ಅವರೆ.
ಈ ರೀತಿಯಾಗಿ 85 ಖಂಡಗಳ ಮಧ್ಯದ ಕಲಶಗಳಲ್ಲಿ 85 ದ್ರವ್ಯಗಳನ್ನು ಪ್ರತ್ಯೇಕವಾಗಿ ತುಂಬಿಸಿ, ದ್ರವದ್ರವ್ಯಗಳಿದ್ದ ಕಲಶಗಳನ್ನು ಬಿಟ್ಟು ಉಳಿದೆಲ್ಲಾ ಕಲಶಗಳಿಗೆ ನೀರನ್ನು ತುಂಬಿಸಿ, ದೇವರನ್ನಾವಾಹಿಸಿ ಸುತ್ತಲೂ 9 ಅಥವಾ 5 ಕುಂಡಗಳಲ್ಲಿ ಅಧಿವಾಸಹೋಮ ಮಾಡಿ ದ್ರವ್ಯಗಳ ರಸವು ನೀರಿನಲ್ಲಿ ಸೇರುವುದಕ್ಕೋಸ್ಕರ ಒಂದು ರಾತ್ರಿ ಬಿಡುವುದು.
Leave a Reply