ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ದ್ರವ್ಯ ಸಹಿತವಾದ ಬ್ರಹ್ಮಕಲಶಾಭಿಷೇಕವಾದ ಮೇಲೆ ತಂತ್ರೋಕ್ತ ವಿಧಿಯಂತೆ ಎಲ್ಲಾ ಕಲಾತತ್ವಗಳನ್ನು ಬಿಂಬದಲ್ಲಿ ನ್ಯಾಸ ಮಾಡಿ ,ಬಿಂಬದಲ್ಲಿ ಶಿವನು ಸಕಲಕಲಾಪೂರ್ಣತೆಯನ್ನು ಹೊಂದಿದ್ದಾನೆ ಎಂದು ಭಾವಿಸಿ, ಉಪಚಾರಗಳನ್ನು ಸಮರ್ಪಿಸಿ, ವಿಶೇಷ ನೈವೇದ್ಯವನ್ನು ಮಾಡಿ ಹೊರಗೆ ಬಂದು ಅಗ್ನಿಯಲ್ಲಿ ಅಗ್ನಿರೂಪನಾದ ಪರಶಿವನಿಗೆ ಅನ್ನದಿಂದ ಆಹುತಿಗಳನ್ನು ಕೊಟ್ಟು, ವಾಹನವನ್ನು ಪೂಜಿಸಿ, ಒಳಗೆ ಹೋಗಿ ನೈವೇದ್ಯವನ್ನು ವಿಸರ್ಜಿಸಿ, ಮಹಾಪೂಜೆಯನ್ನು ಮಾಡುವುದು. ಆಮೇಲೆ ಕಲಶದ ಶೇಷ ತೀರ್ಥವನ್ನು ಎಲ್ಲಾ ಬಲಿಶಿಲೆಗಳಿಗೆ ಹಾಕಿ ಬಲಿಪರಿವಾರ ದೇವತೆಗಳಿಗೆ ಬಲಿಯನ್ನು... Continue Reading →
ಬ್ರಹ್ಮಕಲಶ ಪ್ರಬೋಧಿನೀ: ಪರಿಕಲಶ, ದ್ರವ್ಯ ಕಲಶ, ಬ್ರಹ್ಮ ಕಲಶ, ಅಭಿಷೇಕ ವಿಧಾನ
ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಗಂಧ, ಪುಷ್ಪ,ಫಲ, ಕೆತ್ತೆಗಳ ಕಷಾಯ ಇತ್ಯಾದಿ ಸಸ್ಯಜನ್ಯ ವಸ್ತುಗಳು. ಹಾಲು.ಮೊಸರು, ತುಪ್ಪ,ಗೋರೋಚನ ಇತ್ಯಾದಿ ಪ್ರಾಣಿಜನ್ಯ ವಸ್ತುಗಳು. ಚಿನ್ನ, ಬೆಳ್ಳಿ, ಪಾದರಸ ಇತ್ಯಾದಿ ಭೂಮಿಜನ್ಯವಸ್ತುಗಳು. , ಮುತ್ತು.ಹವಳ,ಶಂಖ, ಇತ್ಯಾದಿ ಸಾಗರಜನ್ಯ ವಸ್ತುಗಳು.ವಜ್ರ, ಮಾಣಿಕ್ಯ, ಧಾತುಗಳು ಇತ್ಯಾದಿ ಪರ್ವತಜನ್ಯ ವಸ್ತುಗಳಿಂದ ಕೂಡಿದ ಪಂಚಭೂತಾತ್ಮಕವಾದ ದ್ರವ್ಯ ಗಳನ್ನು ತುಂಬಿಸಿ. ರಾತ್ರಿಯಲ್ಲಿ ಅಧಿವಾಸ ಮಾಡಿದ ಕಲಶಗಳನ್ನು ಅಭಿಷೇಕ ಮಾಡಲು ಆಚಾರ್ಯರು ಪ್ರಾತ಼ಃ ಕಾಲದಲ್ಲಿ ಸ್ನಾನ ಸಂಧ್ಯಾವಂದನೆಯನ್ನು ಪೂರೈಸಿ ,ತಮ್ಮ ಹಿರಿಯರನ್ನು ತರ್ಪಣಾದಿಗಳಿಂದ ಸಂಪ್ರೀತಿ... Continue Reading →
ಬ್ರಹ್ಮಕಲಶ ಪ್ರಬೋಧಿನೀ: ಬ್ರಹ್ಮಕಲಶದ ಅಧಿವಾಸ ಕ್ರಮ
ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಅಭಿಷೇಕದ ಹಿಂದಿನ ದಿವಸ ಬ್ರಹ್ಮಕಲಶ ಸಹಿತ ಖಂಡ ಕಲಶಗಳಲ್ಲಿ ದ್ರವ್ಯಗಳನ್ನು ತುಂಬಿಸಿ ಪರಿಕಲಶಗಳಲ್ಲಿ ನೀರನ್ನು ತುಂಬಿಸಿ, ದೇವರನ್ನಾವಾಹಿಸಿ(ಅಶ್ವತ್ಥ, ಅತ್ತಿ, ಕಿರುಗೋಳಿ, ಗೋಳಿ, ಮಾವು ಮರಗಳ ತುದಿ ಎಲೆಗಳು) ಪಂಚಪಲ್ಲವಗಳನ್ನಿಟ್ಟು ,ತೆಂಗಿನಕಾಯಿಯನ್ನಿಟ್ಟು ರೇಷ್ಮೆ ವಸ್ತ್ರಗಳೆರಡನ್ನು ಸುತ್ತಿ, ಹೂವುಗಳಿಂದ ಅಲಂಕರಿಸಿ ಸುತ್ತಲೂ 9 ಅಥವಾ 5 ಕುಂಡಗಳಲ್ಲಿ ಬೇರೆ ಬೇರೆ ಸಮಿಧೆ ಸಹಿತ ಹತ್ತು ದ್ರವ್ಯಗಳಿಂದ ಪ್ರತ್ಯೇಕ 108 ಸಂಖ್ಯೆಗಳಲ್ಲಿ ಆಹುತಿಗಳನ್ನು ಕೊಡುವುದು. ಒಟ್ಟಾರೆ 9720 ಆಹುತಿಗಳಾಗುವುದು. ಕುಂಡದ ಆಕಾರ... Continue Reading →
ಬ್ರಹ್ಮಕಲಶ ಪ್ರಬೋಧಿನೀ: ಬ್ರಹ್ಮ ಕಲಶ ಹಾಗೂ ಪರಿಕಲಶದಲ್ಲಿ ಪೂರಣ ಮಾಡುವ ದ್ರವ್ಯಗಳು.
ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಬ್ರಹ್ಮ ಕಲಶ ಅಭಿಷೇಕದ ಹಿಂದಿನ ದಿವಸ ರಾತ್ರಿ ಕಲಶಪೀಠದಲ್ಲಿ ಶಕ್ತಿದೇವತೆಯನ್ನು ಪೂಜಿಸಿ ಅದರ ಮೇಲೆ ಎಲ್ಲಾ ಕುಂಭಗಳನ್ನು ಧೂಪ ಹಿಡಿದು ಕೆಳಮುಖವಾಗಿ ಇಟ್ಟು ತಂತ್ರೋಕ್ತಕ್ರಮದಲ್ಲಿ ಸಂಸ್ಕಾರ ಮಾಡಿ ಮೇಲ್ಮುಖವಾಗಿ ಕುಂಭವನ್ನು ಜಗದಂಡಾಕಾರವಾಗಿ ಸ್ಮರಿಸಿ ನಾಡೀ ಭಾವನೆಯಲ್ಲಿ ದರ್ಭೆಯ ಕೂರ್ಚವನ್ನು ಹಾಕಿ ಜೀವ ಭಾವನೆಯಲ್ಲಿ ದ್ರವ್ಯಗಳನ್ನು ತುಂಬಿಸುವುದು. 1.ಬ್ರಹ್ಮಕಲಶದಲ್ಲಿ ಶಾಂತಿಜಲ (ನವರತ್ನ ಮಣಿಗಳು, ಚಿನ್ನ,ಗಂಧ) ಅದರ 1 ನೇ ಸುತ್ತಿನಲ್ಲಿ (ದೈವಿಕ)2.ಪಾದ್ಯ (ಸಾಸಿವೆ,ಪರ್ವತದ ಮಣ್ಣು,ಎಳ್ಳು, ಗರಿಕೆ ಹುಲ್ಲು)3.ಆಚಮನ (ತಕ್ಕೋಲ,ಜಾಯಿಕಾಯಿ,ಲವಂಗ)4.ಅರ್ಘ್ಯ... Continue Reading →
ಬ್ರಹ್ಮಕಲಶ ಪ್ರಬೋಧಿನೀ: ಪೀಠ ರಚನೆ
ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಮಂಟಪವನ್ನು ನಿರ್ಮಿಸಿ ಮಂಡಲ ರಚನೆ ಮಾಡಿ ಮಧ್ಯದಲ್ಲಿ ಬ್ರಹ್ಮ ಕುಂಭ ಸ್ಥಾಪನೆ ಮಾಡಲು ಷಟ್ಪೀಠ ಅಂದರೆ ಆಧಾರ ಶಕ್ತಿ, ಮೂಲಪ್ರಕ್ಕೃತಿ, ಆದಿ ಕೂರ್ಮ, ಅನಂತ, ಪೃಥಿವೀ, ಪದ್ಮಗಳ ಪ್ರತೀಕವಾಗಿ ಆರು ವಸ್ತುಗಳಿಂದ ನಿರ್ಮಿಸುವುದು.(ದ್ರೋಣಾದ್ಯುನ್ಮಿತ ಶಾಲಿ ತಂಡುಲ ತಿಲೈಃ ಪಿಠಂ ಸಸಿಧ್ಧಾರ್ಥಕೈ಼ಃ)ಮಂಡಲದ ಮಧ್ಯದ ಪದ್ಮವು ಒಂದನೇ ಪದ್ಮ ಪೀಠಅದರಮೇಲೆ ಒಂದು ದ್ರೋಣ ಅಂದರೆ 14 ಸೇರುಭತ್ತಅದರಮೇಲೆ 7 ಸೇರು ಅಕ್ಕಿಅದರಮೇಲೆ ಮೂರುವರೆ ಸೇರು ಎಳ್ಳುಅದರಮೇಲೆ ಒಂದುಮುಕ್ಕಾಲುಸೇರು ಸಾಸಿವೆಯನ್ನು ವಸ್ತ್ರದಲ್ಲಿ... Continue Reading →
ಬ್ರಹ್ಮಕಲಶ ಪ್ರಬೋಧಿನೀ: ಕಲಶ ಮಂಡಲ ರಚನೆ
ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಮಂಟಪ ಸಂಸ್ಕಾರ ಮಾಡಿ ಕಲಶ ಸಂಖ್ಯೆಗನುಸಾರವಾಗಿ ಮಂಡಲವನ್ನು ರಚನೆ ಮಾಡುವುದು. 505 ಕಲಶ ಕ್ರಮದಲ್ಲಿ ಎರಡು ವಿಧಗಳಿವೆ. 25 ದ್ರವ್ಯ ಹಾಗೂ 85 ದ್ರವ್ಯಗಳ ವಿಧಾನ.85 ದ್ರವ್ಯದ ಕ್ರಮವಾದರೆ ಪೂರ್ವ ಪಶ್ಚಿಮ ಮತ್ತು ದಕ್ಷಿಣ ಉತ್ತರವಾಗಿ 31 ಪುಟಗಳಾಗುವಂತೆ ರೇಖೆಗಳನ್ನು ಬರೆದು ಅವುಗಳಲ್ಲಿ 85 ಖಂಡಗಳಾಗುವಂತೆ ವಿಭಾಗ ಮಾಡುವುದು. ಮಧ್ಯದ 9 ಪುಟಗಳಲ್ಲಿ ಪದ್ಮವನ್ನು ರಚಿಸಿ. ಅದರ ಸುತ್ತ 4 ಆವರಣಗಳಿರುತ್ತವೆ. ಮಧ್ಯದ ಪದ್ಮಕ್ಕೆ ಬ್ರಹ್ಮಪದವೆಂತಲೂ ಅದರ... Continue Reading →
ಬ್ರಹ್ಮಕಲಶ ಪ್ರಬೋಧಿನೀ: ಮಂಟಪ ಸಂಸ್ಕಾರ
ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ (ಕಲಶ ಸಂಖ್ಯೆಗಳು - 109..157..217..253..301..505..1001) ಕಲಶ ಸಂಖ್ಯೆಗಳಿಗೆ ಅನುಸಾರವಾಗುವಷ್ಟು ದೊಡ್ಡ ದಾದ.ನಾಲ್ಕು ದ್ವಾರಗಳಿರುವಂತೆ ಹೊರಗೆ ಒಂದು ಪ್ರಾಕಾರ ಬರುವಂತೆ 24 ಕಂಬಗಳ ಸ್ಥಳಾವಕಾಶ ಕಡಿಮೆ ಇದ್ದರೆ 12 ಕಂಬಗಳ ಮಂಟಪವನ್ನು ನಿರ್ಮಿಸಿ.ಸುತ್ತ ಚೌಕ, ಅಶ್ವತ್ಥ ಎಲೆಯಾಕಾರ, ಅರ್ಧಚಂದ್ರ, ತ್ರಿಕೋನ, ವ್ರೃತ್ತಾಕಾರ, ಷಟ್ಕೋನ, ಅಷ್ಟಕೋನ, ಅಷ್ಟದಲಾಕಾರ, ಚೌಕಾಕಾರಗಳ 9 ಅಥವಾ 5 ಕುಂಡಗಳನ್ನು ರಚಿಸಿ, ಅಲಂಕರಿಸಿ ದರ್ಭೆಯಹಗ್ಗ,ನೂಲನ್ನು ಕಟ್ಟಿ ನಾಲ್ಕು ದಿಕ್ಕುಗಳಲ್ಲಿ ಕಿರುಗೋಳಿ ,.ಅತ್ತಿ,.ಗೋಳಿ,. ಅಶ್ವತ್ಥ ಮರಗಳಿಂದ ಮಾಡಿದ... Continue Reading →
ಬ್ರಹ್ಮಕಲಶ ಪ್ರಬೋಧಿನೀ: ಅಷ್ಟಬಂಧಕ್ಕೆ ಬೇಕಾದ ಸಾಮಗ್ರಿಗಳು
ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಅಷ್ಟಬಂಧ ಎಂದರೆ, ಶಂಖದಹುಡಿಬೆಲ್ಲನೆಲ್ಲಿಕಾಯಿ ಸಕ್ಕರೆ ಅರಗುಹತ್ತಿಯ ಬೀಜಗುಗ್ಗುಲಎಮ್ಮೆಯ ಬೆಣ್ಣೆ ಇವುಗಳನ್ನು ಓಟ್ಟಿಗೆ ಗುದ್ದಿಹುಡಿಮಾಡಿ ಎಳ್ಳೆಣ್ಣೆಯಲ್ಲಿ ಕಲಸಿದ ಒಂದುರೀತಿಯ ಅಂಟು ಅಷ್ಟಬಂಧ ಹಾಕುವ ಮೊದಲು ಪೀಠದ ಅಡಿಯಲ್ಲಿ ಹಾಕಲು ಬೇಕಾದ ವಿಶೇಷ ವಸ್ತುಗಳು ಚಿನ್ನದ ಪದ್ಮಚಿನ್ನದ ಪರಶುಚಿನ್ನದ ರುದ್ರಾಕ್ಷಿ ಮಾಲೆಚಿನ್ನದ ತ್ರಿಶೂಲಚಿನ್ನದ ನಂದಿಚಿನ್ನದ ತುಂಡು ರತ್ನಗಳು ಮುತ್ತು ವೈಢೂರ್ಯ ವಜ್ರ ಮರಕತ ಗೋಮೇಧಿಕಪುಷ್ಯರಾಗ ಇಂದ್ರನೀಲಸ್ಫಟಿಕಪದ್ಮರಾಗಚಂದ್ರಕಾಂತ ಮಹಾನೀಲ ಪದ್ಮರಾಗಹವಳಶಂಖಲೋಹಗಳು ಚಿನ್ನಬೆಳ್ಳಿ ಕಬ್ಬಿಣತವರ ಸೀಸಅರಗು ಹಿತ್ತಾಳೆಕಂಚುಧಾತುಗಳು ಮನಃಶಿಲಾಅರ್ದಳ ಅಂಜನ ಶ್ಯಾಮ ಸೀಸಸೌರಾಷ್ಟ್ರೀಗೋರೋಚನಗೈರಿಕಾಪಾದರಸಜೇನು... Continue Reading →
Sita Anveshana – Sundarakanda Nirnaya
Sri Hanumanta effortlessly landed in Lanka, in spite of multiple obstacles on the way such as the request of Mainaka Parvata, the challenge of Surasa, the threat of Simhika and then eventually the brief resistance by Lankini. Hanuman then enacts a wonderful drama "searching" for Sita. Being the best amongst all jeevas, Hanuman always knew... Continue Reading →
Lankini Parajaya – Sundarakanda Nirnaya
Hanuman continued his journey towards Lanka after having addressed the request of Mainaka and subsequently defeating Surasa and Simhika. He then landed in Lanka. निःसीममात्मबलमित्यनुदर्शयानोहत्वैव तामपि विधातृवराभिगुप्ताम् |लम्बे स लम्बशिखरे निपपात लङ्काप्राकाररूपकगिरावथ सञ्चुकोच || 8 || Displaying अनुदर्शयानः his unlimited निःसीम strength आत्मबल, he (Hanuman) destroyed हत्वैव her तामपि (Simhika) who was protected अभिगुप्त by... Continue Reading →