ಬ್ರಹ್ಮಕಲಶ ಪ್ರಬೋಧಿನೀ: ಕಲಶಾಭಿಷೇಕದ ನಂತರದ ಕ್ರಿಯೆಗಳು.

ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ದ್ರವ್ಯ ಸಹಿತವಾದ ಬ್ರಹ್ಮಕಲಶಾಭಿಷೇಕವಾದ ಮೇಲೆ ತಂತ್ರೋಕ್ತ ವಿಧಿಯಂತೆ ಎಲ್ಲಾ ಕಲಾತತ್ವಗಳನ್ನು ಬಿಂಬದಲ್ಲಿ ನ್ಯಾಸ ಮಾಡಿ ,ಬಿಂಬದಲ್ಲಿ ಶಿವನು ಸಕಲಕಲಾಪೂರ್ಣತೆಯನ್ನು ಹೊಂದಿದ್ದಾನೆ ಎಂದು ಭಾವಿಸಿ, ಉಪಚಾರಗಳನ್ನು ಸಮರ್ಪಿಸಿ, ವಿಶೇಷ ನೈವೇದ್ಯವನ್ನು ಮಾಡಿ ಹೊರಗೆ ಬಂದು ಅಗ್ನಿಯಲ್ಲಿ ಅಗ್ನಿರೂಪನಾದ ಪರಶಿವನಿಗೆ ಅನ್ನದಿಂದ  ಆಹುತಿಗಳನ್ನು ಕೊಟ್ಟು, ವಾಹನವನ್ನು ಪೂಜಿಸಿ, ಒಳಗೆ ಹೋಗಿ ನೈವೇದ್ಯವನ್ನು ವಿಸರ್ಜಿಸಿ, ಮಹಾಪೂಜೆಯನ್ನು ಮಾಡುವುದು. ಆಮೇಲೆ ಕಲಶದ ಶೇಷ ತೀರ್ಥವನ್ನು ಎಲ್ಲಾ ಬಲಿಶಿಲೆಗಳಿಗೆ ಹಾಕಿ ಬಲಿಪರಿವಾರ ದೇವತೆಗಳಿಗೆ ಬಲಿಯನ್ನು... Continue Reading →

ಬ್ರಹ್ಮಕಲಶ ಪ್ರಬೋಧಿನೀ: ಪರಿಕಲಶ, ದ್ರವ್ಯ ಕಲಶ, ಬ್ರಹ್ಮ ಕಲಶ, ಅಭಿಷೇಕ ವಿಧಾನ

ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಗಂಧ, ಪುಷ್ಪ,ಫಲ, ಕೆತ್ತೆಗಳ ಕಷಾಯ ಇತ್ಯಾದಿ ಸಸ್ಯಜನ್ಯ ವಸ್ತುಗಳು.  ಹಾಲು.ಮೊಸರು, ತುಪ್ಪ,ಗೋರೋಚನ ಇತ್ಯಾದಿ ಪ್ರಾಣಿಜನ್ಯ ವಸ್ತುಗಳು.  ಚಿನ್ನ, ಬೆಳ್ಳಿ, ಪಾದರಸ ಇತ್ಯಾದಿ ಭೂಮಿಜನ್ಯವಸ್ತುಗಳು. , ಮುತ್ತು.ಹವಳ,ಶಂಖ, ಇತ್ಯಾದಿ ಸಾಗರಜನ್ಯ ವಸ್ತುಗಳು.ವಜ್ರ, ಮಾಣಿಕ್ಯ, ಧಾತುಗಳು ಇತ್ಯಾದಿ ಪರ್ವತಜನ್ಯ ವಸ್ತುಗಳಿಂದ ಕೂಡಿದ ಪಂಚಭೂತಾತ್ಮಕವಾದ ದ್ರವ್ಯ ಗಳನ್ನು   ತುಂಬಿಸಿ. ರಾತ್ರಿಯಲ್ಲಿ ಅಧಿವಾಸ ಮಾಡಿದ ಕಲಶಗಳನ್ನು ಅಭಿಷೇಕ ಮಾಡಲು ಆಚಾರ್ಯರು ಪ್ರಾತ಼ಃ ಕಾಲದಲ್ಲಿ ಸ್ನಾನ ಸಂಧ್ಯಾವಂದನೆಯನ್ನು ಪೂರೈಸಿ ,ತಮ್ಮ ಹಿರಿಯರನ್ನು ತರ್ಪಣಾದಿಗಳಿಂದ ಸಂಪ್ರೀತಿ... Continue Reading →

ಬ್ರಹ್ಮಕಲಶ ಪ್ರಬೋಧಿನೀ: ಬ್ರಹ್ಮಕಲಶದ ಅಧಿವಾಸ ಕ್ರಮ

ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್ ಅಭಿಷೇಕದ ಹಿಂದಿನ ದಿವಸ ಬ್ರಹ್ಮಕಲಶ ಸಹಿತ ಖಂಡ ಕಲಶಗಳಲ್ಲಿ ದ್ರವ್ಯಗಳನ್ನು ತುಂಬಿಸಿ ಪರಿಕಲಶಗಳಲ್ಲಿ ನೀರನ್ನು ತುಂಬಿಸಿ,  ದೇವರನ್ನಾವಾಹಿಸಿ(ಅಶ್ವತ್ಥ, ಅತ್ತಿ, ಕಿರುಗೋಳಿ, ಗೋಳಿ, ಮಾವು ಮರಗಳ ತುದಿ ಎಲೆಗಳು) ಪಂಚಪಲ್ಲವಗಳನ್ನಿಟ್ಟು ,ತೆಂಗಿನಕಾಯಿಯನ್ನಿಟ್ಟು ರೇಷ್ಮೆ ವಸ್ತ್ರಗಳೆರಡನ್ನು ಸುತ್ತಿ, ಹೂವುಗಳಿಂದ ಅಲಂಕರಿಸಿ ಸುತ್ತಲೂ 9 ಅಥವಾ 5  ಕುಂಡಗಳಲ್ಲಿ ಬೇರೆ ಬೇರೆ ಸಮಿಧೆ ಸಹಿತ ಹತ್ತು ದ್ರವ್ಯಗಳಿಂದ ಪ್ರತ್ಯೇಕ 108 ಸಂಖ್ಯೆಗಳಲ್ಲಿ ಆಹುತಿಗಳನ್ನು ಕೊಡುವುದು. ಒಟ್ಟಾರೆ  9720 ಆಹುತಿಗಳಾಗುವುದು. ಕುಂಡದ ಆಕಾರ... Continue Reading →

Blog at WordPress.com.

Up ↑