ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್
(ಕಲಶ ಸಂಖ್ಯೆಗಳು – 109..157..217..253..301..505..1001)
ಕಲಶ ಸಂಖ್ಯೆಗಳಿಗೆ ಅನುಸಾರವಾಗುವಷ್ಟು ದೊಡ್ಡ ದಾದ.ನಾಲ್ಕು ದ್ವಾರಗಳಿರುವಂತೆ ಹೊರಗೆ ಒಂದು ಪ್ರಾಕಾರ ಬರುವಂತೆ 24 ಕಂಬಗಳ ಸ್ಥಳಾವಕಾಶ ಕಡಿಮೆ ಇದ್ದರೆ 12 ಕಂಬಗಳ ಮಂಟಪವನ್ನು ನಿರ್ಮಿಸಿ.ಸುತ್ತ ಚೌಕ, ಅಶ್ವತ್ಥ ಎಲೆಯಾಕಾರ, ಅರ್ಧಚಂದ್ರ, ತ್ರಿಕೋನ, ವ್ರೃತ್ತಾಕಾರ, ಷಟ್ಕೋನ, ಅಷ್ಟಕೋನ, ಅಷ್ಟದಲಾಕಾರ, ಚೌಕಾಕಾರಗಳ 9 ಅಥವಾ 5 ಕುಂಡಗಳನ್ನು ರಚಿಸಿ, ಅಲಂಕರಿಸಿ ದರ್ಭೆಯಹಗ್ಗ,ನೂಲನ್ನು ಕಟ್ಟಿ ನಾಲ್ಕು ದಿಕ್ಕುಗಳಲ್ಲಿ ಕಿರುಗೋಳಿ ,.ಅತ್ತಿ,.ಗೋಳಿ,. ಅಶ್ವತ್ಥ ಮರಗಳಿಂದ ಮಾಡಿದ ತೋರಣಗಳನ್ನು ಕಟ್ಟಿ, ತೋರಣದೇವತೆಗಳನ್ನು ಆವಾಹಿಸಿ ಪೂಜಿಸಿ, 10 ದಿಕ್ಕುಗಳಲ್ಲಿ ದಿಕ್ಪಾಲಕರ ವಾಹನದ ಚಿಹ್ನೆ ಇರುವ ಆಯಾ ಬಣ್ಣದ ಪತಾಕೆಗಳನ್ನು ಕಟ್ಟಿ ಧ್ವಜ ದೇವತೆಗಳನ್ನು ಆವಾಹಿಸಿ ಪೂಜಿಸಿ, ನಾಲ್ಕುದ್ವಾರಗಳಲ್ಲಿ ಕಲಶಗಳನ್ನಿಟ್ಟು ದ್ವಾರ ದೇವತೆ ಗಳನ್ನಾವಾಹಿಸಿ ಪೂಜಿಸಿ ಶುದ್ಧಿಗೊಳಿಸಿ ದಿಗ್ಭಂಧನಮಾಡಿ ಮಂಟಪದೇವತೆಗಳನ್ನು ಪೂಜಿಸಿ ಮಂಟಪವನ್ನು ಲಕ್ಷ್ಮೀ ದೇವಿಯ ನಿವಾಸಸ್ಥಾನವೆಂದು ಭಾವಿಸುವುದು.
ಮಂಟಪದ ಈಶಾನ್ಯ ದಿಕ್ಕಿನಲ್ಲಿ ಕುಂಭೇಶ ಕರ್ಕರೀ ಎನ್ನುವ ಎರಡು ಕಲಶಗಳನ್ನಿಟ್ಟು ಕುಂಭೇಶದಲ್ಲಿ ಓಂಕಾರ ಸ್ವರೂಪವಾದ ತ್ರಿಮೂರ್ತಿ ರೂಪದ ತ್ರಿತತ್ವವನ್ನು ಪೂಜಿಸುವುದು.
ಕರ್ಕರೀಯಲ್ಲಿ ಅಸ್ತ್ರ ದೇವತೆಯನ್ನು ರಕ್ಷಣೆಗಾಗಿ ಪೂಜಿಸುವುದು.
ಕಲಶ ಅಭಿಷೇಕ ಕಾಲದಲ್ಲಿ ಎಲ್ಲಾ ಪರಿಕಲಶಗಳ ಅಭಿಷೇಕ ಆದಮೇಲೆ ಬ್ರಹ್ಮಕಲಶಕ್ಕೆ ಮಂಟಪದಲ್ಲಿರುವ ಧ್ವಜ,ತೋರಣ, ದ್ವಾರ, ಪೀಠ ದೇವತೆಗಳನ್ನು ಉದ್ವಾಸಿಸಿ ಮೆರವಣಿಗೆ ಕಾಲದಲ್ಲಿ ಕರ್ಕರೀಕಲಶವನ್ನು ರಕ್ಷೆಗಾಗಿ ಧಾರೆ ಎರೆದು ಕೊಂಡು ಹೋಗಿ ಮೊದಲು ಕುಂಭೇಶ ಕಲಶವನ್ನು ಅಭಿಷೇಕ ಮಾಡಿ ಬ್ರಹ್ಮ ಕಲಶವನ್ನು ಅಭಿಷೇಕ ಮಾಡುವುದು .
Leave a Reply