ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್
ಮಂಟಪ ಸಂಸ್ಕಾರ ಮಾಡಿ ಕಲಶ ಸಂಖ್ಯೆಗನುಸಾರವಾಗಿ ಮಂಡಲವನ್ನು ರಚನೆ ಮಾಡುವುದು. 505 ಕಲಶ ಕ್ರಮದಲ್ಲಿ ಎರಡು ವಿಧಗಳಿವೆ. 25 ದ್ರವ್ಯ ಹಾಗೂ 85 ದ್ರವ್ಯಗಳ ವಿಧಾನ.
85 ದ್ರವ್ಯದ ಕ್ರಮವಾದರೆ ಪೂರ್ವ ಪಶ್ಚಿಮ ಮತ್ತು ದಕ್ಷಿಣ ಉತ್ತರವಾಗಿ 31 ಪುಟಗಳಾಗುವಂತೆ ರೇಖೆಗಳನ್ನು ಬರೆದು ಅವುಗಳಲ್ಲಿ 85 ಖಂಡಗಳಾಗುವಂತೆ ವಿಭಾಗ ಮಾಡುವುದು. ಮಧ್ಯದ 9 ಪುಟಗಳಲ್ಲಿ ಪದ್ಮವನ್ನು ರಚಿಸಿ. ಅದರ ಸುತ್ತ 4 ಆವರಣಗಳಿರುತ್ತವೆ. ಮಧ್ಯದ ಪದ್ಮಕ್ಕೆ ಬ್ರಹ್ಮಪದವೆಂತಲೂ ಅದರ ಮೊದಲನೇ ಸುತ್ತಿಗೆ ದೈವಿಕ ಎಂದೂ ಎರಡನೇ ಸುತ್ತಿಗೆ ಮಾನುಷ ಎಂದೂ ಮೂರನೇ ಸುತ್ತಿಗೆ ಪೈಶಾಚ ಎಂದೂ ನಾಲ್ಕನೇ ಸುತ್ತಿಗೆ ಅತಿಪೈಶಾಚ ಎಂದು ಹೆಸರು.
ದೈವಿಕದಲ್ಲಿ 8 ಖಂಡ 16 ಕಲಶಗಳೂ, ಮಾನುಷದಲ್ಲಿ 16 ಖಂಡ 92 ಕಲಶಗಳು, ಪೈಶಾಚದಲ್ಲಿ 32 ಖಂಡ 144 ಕಲಶಗಳು, ಅತಿಪೈಶಾಚದಲ್ಲಿ 28 ಖಂಡ 252 ಕಲಶಗಳು, ಮಧ್ಯದ ಬ್ರಹ್ಮ 1 ಸೇರಿ 505 ಕಲಶಗಳನ್ನಿಡುವಂತೆ ಮಂಡಲವನ್ನು ರಚಿಸುವುದು

Leave a Reply