ಮಾಹಿತಿ ಕೃಪೆ: ಚತುರ್ವೇದಿ ಶ್ರೀ ನೆಲ್ಲಿತೀರ್ಥ ವಸಂತ ಭಟ್
ಮಂಟಪವನ್ನು ನಿರ್ಮಿಸಿ ಮಂಡಲ ರಚನೆ ಮಾಡಿ ಮಧ್ಯದಲ್ಲಿ ಬ್ರಹ್ಮ ಕುಂಭ ಸ್ಥಾಪನೆ ಮಾಡಲು ಷಟ್ಪೀಠ ಅಂದರೆ ಆಧಾರ ಶಕ್ತಿ, ಮೂಲಪ್ರಕ್ಕೃತಿ, ಆದಿ ಕೂರ್ಮ, ಅನಂತ, ಪೃಥಿವೀ, ಪದ್ಮಗಳ ಪ್ರತೀಕವಾಗಿ ಆರು ವಸ್ತುಗಳಿಂದ ನಿರ್ಮಿಸುವುದು.(ದ್ರೋಣಾದ್ಯುನ್ಮಿತ ಶಾಲಿ ತಂಡುಲ ತಿಲೈಃ ಪಿಠಂ ಸಸಿಧ್ಧಾರ್ಥಕೈ಼ಃ)
ಮಂಡಲದ ಮಧ್ಯದ ಪದ್ಮವು ಒಂದನೇ ಪದ್ಮ ಪೀಠ
ಅದರಮೇಲೆ ಒಂದು ದ್ರೋಣ ಅಂದರೆ 14 ಸೇರುಭತ್ತ
ಅದರಮೇಲೆ 7 ಸೇರು ಅಕ್ಕಿ
ಅದರಮೇಲೆ ಮೂರುವರೆ ಸೇರು ಎಳ್ಳು
ಅದರಮೇಲೆ ಒಂದುಮುಕ್ಕಾಲುಸೇರು ಸಾಸಿವೆಯನ್ನು ವಸ್ತ್ರದಲ್ಲಿ ಕಟ್ಟಿ ಇಟ್ಟು
ಅದರಮೇಲೆ ದರ್ಭೆಯವಿಷ್ಠರವನ್ನು ಇಟ್ಟಾಗ ಷಟ್ಪೀಠ ಪ್ರತಿಕವಾದ ಆಸನವು ರಚನೆಯಾಗುವುದು.
ಪರಿಕಲಶಗಳಿಗೆ ಭತ್ತದಿಂದ ಅಥವಾ ಅಕ್ಕಿಯಿಂದ ಒಂದು ಪೀಠ ಮಾತ್ರ ಇರುವುದು.
Leave a Reply